Spread the love

ಪತ್ರಕರ್ತರ ಸಂಘಕ್ಕೆ ನಾಲ್ವರು ನಾಮನಿರ್ದೇಶಿತ ಸದಸ್ಯರ ನೇಮಕ
ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಾಲ್ವರು ಪತ್ರಕರ್ತರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ರಾಯಚೂರು ವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಶಿವಪ್ಪ ಮಡಿವಾಳರ್, ವಿಜಯವಾಣಿ ದಿನಪತ್ರಿಕೆಯ ಮಾನ್ವಿ ತಾಲೂಕು ವರದಿಗಾರ ಶರಣಬಸವ ನೀರಮಾನ್ವಿ, ರಾಜ್ ನ್ಯೂಸ್ ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ಸುರೇಶ ರೆಡ್ಡಿ ಟಿ.ಎಸ್ ಹಾಗೂ ಪ್ರಜಾವಾಣಿ ಜಾಲಹಳ್ಳಿ ವರದಿಗಾರ ಅಲಿಬಾಬಾ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.