ಇಂದು ವೈಕುಂಠ ಏಕಾದಶಿ ಪ್ರಯುಕ್ತ ಸಿಯಾ ತಲಾಬ್ ಏರಿಯಾದ ಭೋವಿ ಸಮಾಜದವರು ಹೆಚ್ಚಾಗಿ ವಾಸಿಸುತ್ತಿರುವ ಭೋವಿ ವಡ್ಡರಗಲ್ಲಿ ಉಪ ಬಡಾವಣೆಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜ್ ಸಾಹೇಬ್ರು.ಅವರು ಭೇಟಿ ನೀಡಿ ಅಲ್ಲಿ ನಿರ್ಮಾಣಗೊಂಡಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಮಾಡಿಸಿದರು. ದೇವಸ್ಥಾನದ ಹೆಚ್ಚಿನ ಅಭಿವೃದ್ಧಿಗೆ ಅನುದಾನ ಕೊಡುವುದಾಗಿ ಖಚಿತ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷದ ನಾಯಕರು ಹಾಗೂ ಬಡಾವಣೆಯ ಎಲ್ಲ ಜಾತಿ ಜನಾಂಗದವರು, ಮಹಿಳೆಯರು ಯುವಕರು ಯುವತಿಯರು ವೆಂಕಟೇಶ್ವರ ಆಶೀರ್ವಾದವನ್ನು ಪಡೆದರು. ಗೋವಿಂದ ಪೂಜಾರಿ ಅವರ ನೇತೃತ್ವದಲ್ಲಿ ಮತ್ತು ಬೋವಿ.ವಡ್ಡರ ಸಮಾಜದವರು. .. ಮಹಮ್ಮದ್ ಶಾಲಾಮ್. .ರುದ್ರಪ್ಪ ಅಂಗಡಿ.. ಇಸೂಫ, ಖಾನ್., ಸೈಯದ್ ಮಾಸುಮ್, . ಮಹಾನಗರ ಪಾಲಿಕೆ ಕಾರ್ಪೊರೇಟರ್ ನಾಗರಾಜ್, ಶಶಿಕಲಾ ಭಮರಾಯ ಅಧ್ಯಕ್ಷರು ಭೋವಿ ವಡ್ಡರ ರಾಯಚೂರು ಜಿಲ್ಲಾ ಮಹಿಳಾ ಘಟಕ, ಹಾಗೂ ಜಿಲ್ಲಾ ಭೋವಿ ವಡ್ಡರ ಸಮಾಜದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಎಲ್ಲಾ ಜಾತಿ ಜನಾಂಗದ ಹಿರಿಯ ಮುಖಂಡರುಗಳು ಭಾಗವಹಿಸಿ ಶ್ರೀ ವೆಂಕಟೇಶ್ವರ. ದೇವರ ಕೃಪೆಗೆ ಪಾತ್ರರಾದರು
