ತಿಂತಿಬ್ರಿಜ್ ಕಾಗಿನಲೆ ಕನಕಗುರು ಇನ್ನಿಲ್ಲ ನಿಧನರಾಗಿದ್ದಾರೆ
ಜಾಲಹಳ್ಳಿ 15 ಸಮೀಪದ
ತಿಂಥಣಿ ಬ್ರಿಡ್ಜ್ ಕನಕ
ಪೀಠದಲ್ಲಿ ಮೂರು ದಿನಗಳ ಕಾಲ ನಡೆದ ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿಗಳು ಆತ್ಮೀಯತೆ, ಉತ್ಸಾಹ ಮತ್ತು ಅಪಾರ ಶ್ರಮ ನೀಡಿದ್ದರು. ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಆದರೆ ಸಮ್ಮೇಳನದ ಸಂಭ್ರಮ ಇನ್ನೂ ಮಸಕವಾಗುವಷ್ಟರಲ್ಲಿ, ಸ್ವಾಮೀಜಿಗಳು ಹೃದಯಾಘಾತದಿಂದ ಲಿಂಗೈಕ್ಯರಾದರು ಎಂಬ ಆಘಾತಕಾರಿ ಸುದ್ದಿ ನಂಬಲಾಗುತ್ತಿಲ್ಲ.
ನಿರಂತರವಾಗಿ ಹಾಲುಮತ ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿಗಳ ಅಕಾಲಿಕ ಅಗಲಿಕೆ ಹಾಲುಮತ ಸಮಾಜಕ್ಕೆ ಎಂದಿಗೂ ತುಂಬಲಾಗದ ನಷ್ಟವಾಗಿದೆ.
ಭಾವಪೂರ್ಣ ನಮನಗಳು
